Merchant Support-Kannada


English

हिन्दी

தமிழ்
తెలుగు
ലയാളം
ગુજરાતી
मराठी
বাঙালি

ಮರ್ಚೆಂಟ್ ಸಪೋರ್ಟ್

ಪಾವತಿಗಳು ಮತ್ತು ಬ್ಯಾಂಕ್ ವರ್ಗಾವಣೆಗಳು

ನನ್ನ ಪೇಮೆಂಟ್ ಯಾವಾಗ ಬ್ಯಾಂಕ್ ಗೆ ವರ್ಗಾವಣೆ ಆಗುತ್ತದೆ?

ವ್ಯವಹಾರಿಸಿದ ಮರುದಿನ ನಿಮ್ಮ ಬ್ಯಾಂಕ್ ಗೆ ಪೇಮೆಂಟ್ ವರ್ಗಾಯಿಸಲಾಗುತ್ತದೆ. ಉದಾಹರಣೆಗೆ, ನೀವು ಇಂದು ಸಂಜೆ ಒಂದು ವಹಿವಾಟನ್ನು ಮಾಡಿದರೆ ನಾಳೆ ದಿನದ ಕೊನೆಯಲ್ಲಿ ಅದನ್ನು ವರ್ಗಾವಣೆ ಮಾಡಲಾಗುತ್ತದೆ.

ಮರುದಿನ ನನ್ನ ಪಾವತಿಯನ್ನು ನಾನು ಸ್ವೀಕರಿಸದಿದ್ದರೆ ?

ಮರುದಿನ ನಿಮ್ಮ ಪೇಮೆಂಟ್ ಅನ್ನು ನೀವು ಸ್ವೀಕರಿಸದಿದ್ದರೆ, ದಯವಿಟ್ಟು 72 ಘಂಟೆಗಳು ನೀರಿಕ್ಷಿಸಲು ನಿಮನ್ನು ಮನವಿ ಮಾಡಿಕೊಳ್ಳುತ್ತಿದ್ದೇವೆ. ಮುಂದಿನ 3 ದಿನಗಳಲ್ಲಿ  ಹಣವನ್ನು ವರ್ಗಹಿಸಲು ನಾವು ಪ್ರಯತ್ನಿಸುತ್ತೇವೆ. ಒಂದು ವೇಳೆ ಹಣ ಸ್ವೀಕರಿಸದಿದ್ದಲ್ಲಿ , ನೀವು ನಮ್ಮ ಹೆಲ್ಪ್ ಡೆಸ್ಕ್ 0120- 4440440 ಕ್ಕೆ ಕರೆಮಾಡಿ ವಿನಂತಿಸಿಕೊಳ್ಳಬಹುದು.

ನನ್ನ ಬ್ಯಾಂಕ್ ವರ್ಗಾವಣೆ/ ಪೇಮೆಂಟ್ಸ್ ಹೇಗೆ ಟ್ರ್ಯಾಕ್ ಮಾಡಬಹುದು?

  • Business with Paytm ಅಪ್ಲಿಕೇಶನ್ ನಲ್ಲಿ ನಿಮ್ಮ ಪೇಮೆಂಟ್ / ಬ್ಯಾಂಕ್ ವರ್ಗಾವಣೆಯನ್ನು ಟ್ರ್ಯಾಕ್ ಮಾಡಲು ಸೂಚಿಸಿದ ಹಂತಗಳನ್ನು ಅನುಸರಿಸಿ:

    ಪಾವತಿಸಿದ ಪೇಮೆಂಟ್ಸ್ ಗಳಿಗೆ:

    • Business with Paytm App ತೆರೆಯಿರಿ, ಪೇಮೆಂಟ್ಸ್ ಮೇಲೆ ಟ್ಯಾಪ್ ಮಾಡಿ >> ಬಲ ಮೇಲಿನ ಮೂಲೆಯಲ್ಲಿ ಸೂಚಿಸಲಾಗಿರುವ ಕ್ಯಾಲೆಂಡರ್ ನಲ್ಲಿ ಬಯಸಿದ ದಿನಾಂಕಗಳನ್ನು ಆಯ್ಕೆಮಾಡಿ
    • ಎಲ್ಲಾ ಪಾವತಿಸಿದ ಪೇಮೆಂಟ್ಸ್ ದಿನಾಂಕ ಮತ್ತು ಸ್ವೀಕರಿಸುವವರ ಸಂಖ್ಯೆಯೊಂದಿಗೆ ಕಾಣಿಸಿಕೊಳ್ಳುತ್ತವೆ.ನೀವು ಸ್ಟೇಟ್ಮೆಂಟ್ ಕೂಡ ಡೌನ್ಲೋಡ್ ಮಾಡಿಕೊಳ್ಳಬಹುದು.

    ಸೆಟ್ಟಲ್ ಆಗಿರುವ / ಬ್ಯಾಂಕ್ ವರ್ಗಾವಣೆಗಾಗಿ:

    • Business with Paytm App ತೆರೆಯಿರಿ, ಬ್ಯಾಂಕ್ ವರ್ಗಾವಣೆ ಮೇಲೆ ಟ್ಯಾಪ್ ಮಾಡಿ >> ಬಲಗಡೆ ಮೇಲಿನ ಮೂಲೆಯಲ್ಲಿ ಸೂಚಿಸಲಾಗಿರುವ ಕ್ಯಾಲೆಂಡರ್ ನಲ್ಲಿ ಬಯಸಿದ ದಿನಾಂಕಗಳನ್ನು ಆಯ್ಕೆಮಾಡಿ
    • ಎಲ್ಲಾ ಸ್ವೀಕರಿಸಿದ ಪೇಮೆಂಟ್ಸ್ ದಿನಾಂಕ ಮತ್ತು ಸಮಯದೊಂದಿಗೆ ಕಾಣಿಸಿಕೊಳ್ಳುತ್ತವೆ.ನೀವು ಸ್ಟೇಟ್ಮೆಂಟ್ ಕೂಡ ಡೌನ್ಲೋಡ್ ಮಾಡಿಕೊಳ್ಳಬಹುದು.

ನನ್ನ ಬ್ಯಾಂಕ್ ಪಾಸ್ಬುಕ್ ಅನ್ನು ನಾನು ಹೇಗೆ ಸರಿಹೊಂದಿಸಬಹುದು?

ನಿಮ್ಮ ಖಾತೆಯಲ್ಲಿ ನಾವು ಮಾಡುವ ಪ್ರತಿ ವರ್ಗಾವಣೆಗೆ UTR ಸಂಖ್ಯೆ ಲಭ್ಯವಿದೆ. ನಾವು ವಹಿವಾಟಿನ ವಿರುದ್ಧ ಅಥವಾ Business with Paytm ನಲ್ಲಿ ಕಳುಹಿಸುವ SMS ನಲ್ಲಿ UTR ಅನ್ನು ಪರಿಶೀಲಿಸಬಹುದು (ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ) ಕೆಳಗಿನ ಹಂತಗಳನ್ನು ಅನುಸರಿಸಿ:

ಬ್ಯಾಂಕ್ ಸೆಟಲ್ಮೆಂಟ್ ಗಳಿಗಾಗಿ :

  1. ಬಿಸಿನೆಸ್ ಅಪ್ಲಿಕೇಶನ್ ನಲ್ಲಿ ಬ್ಯಾಂಕ್ ವರ್ಗಾವಣೆ ಟ್ಯಾಬ್ ಗೆ ಹೋಗಿ
  2. ಬಲಗಡೆ ಮೇಲಿನ ಮೂಲೆಯಲ್ಲಿ ನೀಡಲಾದ ಕ್ಯಾಲೆಂಡರ್ ಐಕಾನ್ನಲ್ಲಿ ನೀವು ಸಮನ್ವಯಗೊಳಿಸಲು ಬಯಸುವ ವ್ಯವಹಾರದ ದಿನಾಂಕವನ್ನು ಆಯ್ಕೆಮಾಡಿ.
  3. ನಿಮ್ಮ ಖಾತೆಯಲ್ಲಿ ಸೆಟ್ಲ್ ಆಗಿರುವ ವ್ಯೆಯಕ್ತಿಕ ವ್ಯವಹಾರಗಳೊಂದಿಗೆ ಮೇಲೆ ಒಟ್ಟು ಮೊತ್ತವು ಪ್ರತಿಬಿಂಬಿಸುತ್ತದೆ
  4. UTR ಸಂಖ್ಯೆ ಕಂಡುಹಿಡಿಯಲು ಯಾವುದೇ ಟ್ರಾನ್ಸಾಕ್ಷನ್ ಮೇಲೆ ಟ್ಯಾಪ್ ಮಾಡಿ

ವಹಿವಾಟಿನ ಅದೇ UTR ಸಂಖ್ಯೆ ನಿಮ್ಮ ಬ್ಯಾಂಕ್ ಪಾಸ್ಬುಕ್ / ಸ್ಟೇಟ್ಮೆಂಟ್ ನಲ್ಲಿ ಲಭ್ಯವಿದೆ. ಅದನ್ನು ಸಮನ್ವಯಗೊಳಿಸಲು ಹೊಂದಾಣಿಕೆ ಮಾಡಬಹುದು.

ಅಪ್ಲಿಕೇಶನ್ ಲಾಗಿನ್ ಸೇವೆಗಳು

ನಾನು Paytm for Business app ಗೆ ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ, ಈಗ ನಾನು ಏನು ಮಾಡಬೇಕು?

ನಿಮ್ಮ ಪೇಟಿಎಂ ಅಪ್ಲಿಕೇಶನ್ ನಲ್ಲಿ ಲಾಗಿನ್ ಆಗುವ ರೀತಿಯಲ್ಲೇ ಲಾಗಿನ್ ಆಗಿ. ನೀವು ಪಾಸ್ವರ್ಡ್ ಅನ್ನು ಮರೆತ ಸಮಯದಲ್ಲಿ, ದಯವಿಟ್ಟು Forgot Password ಅನ್ನು ಕ್ಲಿಕ್ ಮಾಡಿ ನಿಮ್ಮ ಪಾಸ್ವರ್ಡ್ ಅನ್ನು ಮರುಹೊಂದಿಸಿಕೊಳ್ಳಿ.

ನನ್ನ ಪಾಸ್ವರ್ಡ್ ಅನ್ನು reset ಮಾಡುವುದು ಹೇಗೆ?

Forgot password ಕ್ಲಿಕ್ ಮಾಡುವ ಮೂಲಕ ಅಥವಾ ಪಾಸ್ವರ್ಡ್ reset ಗೆ ಸಂಬಂಧಿತ ಇತರೆ ತೊಂದರೆಗಳಿಂದ ನೀವು ಪಾಸ್ವರ್ಡ್ reset ಮಾಡಲು ಸಾಧ್ಯವಾಗದ ಸಮಯದಲ್ಲಿ, ದಯವಿಟ್ಟು ಕೆಳಗಿನ ಹಂತಗಳನ್ನು ಅನುಸರಿಸಿ:

1) ನಿಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಯಿಂದ (0120- 4440440) ಕರೆಮಾಡಿ

2) ಪ್ರೊಫೈಲ್/ಲಾಗಿನ್ ತೊಂದರೆಗಳನ್ನು ಆರಿಸಿ

3) ನಿಮ್ಮ ಪಾಸ್ವರ್ಡ್ ಅನ್ನು reset ಅನ್ನು ಮಾಡಲು 1 ಅನ್ನು ಪ್ರೆಸ್ ಮಾಡಿ ಮತ್ತು  IVR ಪೂರ್ಣಗೊಳ್ಳುವ ವರೆಗೆ ನಿರೀಕ್ಷಿಸಿ ನಂತರ ಮತ್ತೊಮ್ಮೆ 1 ಅನ್ನು ಪ್ರೆಸ್ ಮಾಡಿ

4) ಪರಿಶೀಲನೆ ಲಿಂಕ್ ಅನ್ನು ನಿಮ್ಮ ನೊಂದಾಯಿತ ಸಂಖ್ಯೆಗೆ SMS ಮೂಲಕ ಕಳುಹಿಸಲಾಗುತ್ತದೆ

5) ಲಿಂಕ್ ಕ್ಲಿಕ್ ಮಾಡಿದ ನಂತರ ಅದು ನಿಮ್ಮನ್ನು ‘ಹೊಸ ಪೇಟಿಎಂ ಪಾಸ್ವರ್ಡ್ ಅನ್ನು ರಚಿಸಿ’  ಕೇಳುವ ವೆಬ್ ಪೇಜ್ ಗೆ ಕರೆದುಕೊಂಡು ಹೋಗುತ್ತದೆ.

‘ಹೊಸ ಪಾಸ್ವರ್ಡ್ ನಮೂದಿಸಿ‘ ಮತ್ತು ‘ಅಪ್ಡೇಟ್’ ಮೇಲೆ ಕ್ಲಿಕ್ ಮಾಡಿ

ನಿಮ್ಮ ಪಾಸ್ವರ್ಡ್ ಅಪ್ಡೇಟ್ ಮಾಡಲಾಗಿದೆ

ಮಿತಿಗಳು ಮತ್ತು ಶುಲ್ಕಗಳು

ವಾಲೆಟ್ ನಲ್ಲಿ ಪೇಮೆಂಟ್ಸ್ ಸ್ವೀಕರಿಸುವುದು

ವಾಲೆಟ್ ನಲ್ಲಿ ಪಾವತಿಗಳನ್ನು ಸ್ವೀಕರಿಸಲಾಗುತ್ತಿದೆ

ಪೇಟಿಎಂ ಪ್ರೈಮ್ / ಕೆವೈಸಿ ವಾಲೆಟ್ ಬಳಕೆದಾರರಂತೆ, ನೀವು ತಿಂಗಳಿಗೆ 1 ಲಕ್ಷದವರೆಗೆ ಸ್ವೀಕರಿಸಬಹುದು. ಫಲಾನುಭವಿಯನ್ನು ಸೇರಿಸದೆ ಬ್ಯಾಂಕ್/ವಾಲೆಟ್ ಗೆ 10,000.ರೂ ವರೆಗೆ ವರ್ಗಾವಣೆ ಮಾಡಬಹುದಾಗಿದೆ ಮತ್ತು ಫಲಾನುಭವಿಯನ್ನು ಸೇರಿಸಿ 25000.ರೂ ವರೆಗೆ ವರ್ಗಾವಣೆ ಮಾಡಬಹುದಾಗಿದೆ

ಫಲಾನುಭವಿಯನ್ನು ಸೇರಿಸುವುದು ಹೇಗೆ?

ನಿಮ್ಮ ಪೇಟಿಎಂ ಅಪ್ಲಿಕೇಶನ್ ನ ಮೇಲಿನ ಬಲ ಮೂಲೆಯಲ್ಲಿ ಪ್ರೊಫೈಲ್ ಐಕಾನ್ ಮೇಲೆ ಕ್ಲಿಕ್ ಮಾಡಿ. ಫಲಾನುಭವಿ ನಿರ್ವಹಿಸು ಆಯ್ಕೆಮಾಡಿ ನಂತರ ಹಣವನ್ನು ಕಳುಹಿಸಲು ನೀವು ಹೊಸ ಫಲಾನುಭವಿಯನ್ನು ಸೇರಿಸಬಹುದು

ಗಮನಿಸಿ: ಅಪ್ಲಿಕೇಶನ್ನಲ್ಲಿ ‘ಫಲಾನುಭವಿಗಳನ್ನು ಸೇರಿಸಿ’ ಆಯ್ಕೆಯನ್ನು ನೀವು ನೋಡಲು ಸಾಧ್ಯವಾಗದಿದ್ದರೆ. ದಯವಿಟ್ಟು ನಿಮ್ಮ ಪೇಟಿಎಂ ಖಾತೆಯಿಂದ ಲಾಗ್ ಔಟ್ ಮಾಡಿ ಮತ್ತು ಮತ್ತೆ ಲಾಗಿನ್ ಮಾಡಿ.

Paytm Minimum KYC  ಬಳಕೆದಾರನಾಗಿ, ನಿಮ್ಮ ವಾಲೆಟ್ ನಲ್ಲಿ  10,000.ರೂ ವರೆಗೆ ಸ್ವೀಕರಿಸಬಹುದು ಅಥವಾ ಸೇರಿಸಬಹುದು.  ನೀವು  ನಮ್ಮ ಆಫ್ಲೈನ್ ಮತ್ತು ಆನ್ಲೈನ್ ಮರ್ಚೆಂಟ್ ಅಥವಾ ಅಂಗಡಿ ಯಲ್ಲಿ ಟ್ರಾನ್ಸಾಕ್ಷನ್/ಪಾವತಿಸಬಹುದು ಅಥವಾ  ಪೇಟಿಎಂ ನಲ್ಲಿ ರಿಚಾರ್ಜ್ ಮಾಡಿಕೊಳ್ಳಬಹುದು.

Paytm Basic Wallet (a non KYC user) ಬಳಕೆದಾರನಾಗಿ, ನಿಮ್ಮ ವಾಲೆಟ್ ನಲ್ಲಿ ಹಣವನ್ನು ಸೇರಿಸಲು ಅತಃವ ಸ್ವೀಕರಿಸಲು ಸಾಧ್ಯವಿಲ್ಲ. ನಿಮ್ಮ ವಾಲೆಟ್ ನಲ್ಲಿ ಯಾವುದೇ ಹಣವನ್ನು ಹೊಂದಿರುವ ಸಂಧರ್ಭದಲ್ಲಿ , ನೀವು ಇದನ್ನು ನಮ್ಮ ಆಫ್ಲೈನ್ ಮತ್ತು ಆನ್ಲೈನ್ ಮರ್ಚೆಂಟ್ ಅಥವಾ ಅಂಗಡಿ ಯಲ್ಲಿ ಟ್ರಾನ್ಸಾಕ್ಷನ್/ಪಾವತಿಸಬಹುದು ಅಥವಾ  ಪೇಟಿಎಂ ನಲ್ಲಿ ರಿಚಾರ್ಜ್ ಮಾಡಿಕೊಳ್ಳಬಹುದು. ಅಂತಹ ಬ್ಯಾಲೆನ್ಸ್ ಕೇವಲ 5 ವರ್ಷಗಳು ಮಾತ್ರ ಲಭ್ಯವಿರುತ್ತದೆ.

ನೀವು ಈ ಹಣವನ್ನು ಇತರೆ ಬಳಕೆದಾರರಿಗೆ ಅಥವಾ ಬ್ಯಾಂಕ್ ಗೆ  ವರ್ಗಾಯಿಸಲು ಸಾಧ್ಯ

ನಿಮ್ಮ ವಾಲೆಟ್ ಮಿತಿಯನ್ನು ಅಪ್ಗ್ರೇಡ್ ಮಾಡಲು, ಇಲ್ಲಿ ಕ್ಲಿಕ್ ಮಾಡಿ http://m.p-y.tm/KYC ಮತ್ತು ನಿಮ್ಮ ಪೇಟಿಎಂ  ಅಪ್ಲಿಕೇಶನ್ ನಲ್ಲಿ ನೀಡಿರುವ ಡಾಕ್ಯುಮೆಂಟ್ ನಂತೆ ಹೆಸರನ್ನು ಮತ್ತು ಮಾನ್ಯವಾದ ಡಾಕ್ಯುಮೆಂಟ್ ಐಡಿ ನಮೂದಿಸಿ.

ಬ್ಯಾಂಕ್ QR ಕೋಡ್ ನಲ್ಲಿ ಪೇಮೆಂಟ್ಸ್ ಸ್ವೀಕರಿಸುವುದು

ಪೇಟಿಎಂನೊಂದಿಗೆ, ನೇರವಾಗಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಪಾವತಿಯನ್ನು ಸ್ವೀಕರಿಸಿ. QR ಕೋಡ್ ಮೂಲಕ ಸ್ವೀಕರಿಸಿದ ಮೊತ್ತವು ನಮ್ಮೊಂದಿಗೆ ನೀವು ಲಿಂಕ್ ಮಾಡಲಾದ ಬ್ಯಾಂಕ್ ಖಾತೆಯಲ್ಲಿ ಮುಂದಿನ ದಿನದ ಕೊನೆಯಲ್ಲಿ ಸ್ವಯಂಚಾಲಿತವಾಗಿ ಸೆಟ್ಟಲ್ ಆಗುತ್ತದೆ. ನಿಮ್ಮ ಖಾತೆಗೆ ಅನ್ವಯವಾಗುವಂತಹ ದರಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು ನಿಮ್ಮ ಬಿಸಿನೆಸ್ ವಿತ್ ಪೇಟಿಎಂ ಅಪ್ಲಿಕೇಶನ್ ಅಥವಾ ಮರ್ಚೆಂಟ್ ಪ್ಯಾನೆಲ್ ನೊಂದಿಗೆ ಮಿತಿಯ ವಿಭಾಗವನ್ನು ಪರಿಶೀಲಿಸಿ.

ಪೇಮೆಂಟ್ಸ್ ಸ್ವೀಕರಿಸುವುದು

ಗ್ರಾಹಕರು ಮಾಡುವ ಪೇಮೆಂಟ್ಸ್ ಅನ್ನು ನಾನು ಹೇಗೆ ಟ್ರ್ಯಾಕ್ ಮಾಡುವುದು?

ಕೆಳಗೆ ನೀಡಿರುವ ಹಂತಗಳನ್ನು ಅನುಸರಿಸಿ ಪೇಮೆಂಟ್ಸ್ ಅನ್ನು ನೀವು  ಟ್ರ್ಯಾಕ್ ಮಾಡಬಹುದು :

  1. Business with Paytm App  ತೆರೆಯಿರಿ
  2. ನಿಮ್ಮ ಪೇಟಿಎಂ  ನೊಂದಾಯಿತ ಮೊಬೈಲ್ ನಂಬರ್ ಮತ್ತು ಪಾಸ್ವರ್ಡ್ ಜೊತೆ ಲಾಗಿನ್ ಆಗಿ
  3. ಒಮ್ಮೆ ಲಾಗಿನ್ ಅದ ಮೇಲೆ ನೀವು ಹೋಂ ಸ್ಕ್ರೀನ್ ನಲ್ಲಿ ಇರುವಿರಿ ಅಲ್ಲಿ ನೀವು ಇತ್ತೀಚಿಗೆ ಸ್ವೀಕರಿಸಿದ ಪೇಮೆಂಟ್ಸ್ ಕಾಣಬಹುದು. 
  4. ಸ್ಕ್ರೀನ್ ಮೇಲಿರುವ ರೆಫ್ರೆಶ್ ಮೇಲೆ ಟ್ಯಾಪ್ ಮಾಡಿ, ಈಗ ನೀವು ಇತ್ತೀಚಿನ ಪೇಮೆಂಟ್ಸ್ ಅನ್ನು ಪಟ್ಟಿಯ  ಮೇಲ್ಭಾಗದಲ್ಲಿ ಕಾಣಬಹುದು.
  5. ಪೇಮೆಂಟ್ಸ್ ಮೇಲೆ ಟ್ಯಾಪ್ ಮಾಡಿ, ಅದು ನಿಮ್ಮನ್ನು ಮುಂದಿನ ಸ್ಕ್ರೀನ್ ಗೆ ಕರೆದುಕೊಂಡು ಹೋಗುತ್ತದೆ. ಪೇಮೆಂಟ್  ಯಶಸ್ವಿಯಾಗಿ  ಸ್ವೀಕರಿಸಿರುವುದಕ್ಕೆ ಹಸಿರು ಬಣ್ಣದಲ್ಲಿ ಗುರುತು ಮಾಡಿರುತ್ತದೆ ಜೊತೆಗೆ ಗ್ರಾಹಕರ ಮೊಬೈಲ್ ಸಂಖ್ಯೆಯ ಮೊದಲ 2 ಅಂಕಿಗಳು ಮತ್ತು ಕೊನೆಯ 4 ಅಂಕಿಗಳು ತೋರಿಸುತ್ತದೆ. 
  6. ಇತ್ತೀಚಿಗೆ ಸ್ವೀಕರಿಸಿದ ಪೇಮೆಂಟ್ಸ್ ನಲ್ಲಿ ನೀವು ಇತ್ತೀಚಿನ 3 ಪೇಮೆಂಟ್ಸ್ ನೋಡಬಹುದು, ಇನ್ನಷ್ಟು ಅನ್ನು  ಟ್ಯಾಪ್ ಮಾಡಿದರೆ  10 ಪೇಮೆಂಟ್ಸ್ ಕಾಣಬಹುದಾಗಿದೆ. 

              ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ನನ್ನ ಬಳಿ ಸ್ಮಾರ್ಟ್ ಫೋನ್ ಇಲ್ಲ, ಪಾವತಿಗಳನ್ನು ನಾನು ಹೇಗೆ ಟ್ರ್ಯಾಕ್ ಮಾಡಬಹುದು?

ನೀವು ಸ್ಮಾರ್ಟ್ ಫೋನ್ ಹೊಂದಿಲ್ಲದಿದ್ದರೆ , ನಿಮ್ಮ ನೋಂದಾಯಿತ ಪೇಟಿಎಂ ಮೊಬೈಲ್ ಸಂಖ್ಯೆಯಿಂದ 7053112112 ಕ್ಕೆ ಮಿಸ್ಡ್ ಕಾಲ್ ನೀಡಿ ಮತ್ತು ಈ ಕೆಳಗಿನ ಮಾಹಿತಿಯನ್ನು ನೀವು SMS ಮೂಲಕ ಪಡೆಯುತ್ತೀರಿ:

  1. ನೀವು ಮಿಸ್ಡ್ ಕಾಲ್ ನೀಡಿದ ಸಮಯದ ವರೆಗೆ ಹೊಂದಿರುವ ಬ್ಯಾಲೆನ್ಸ್ (ಉದಾ: ನೀವು 4pm ಗಂಟೆಗೆ ಮಿಸ್ಡ್ ಕಾಲ್ ನೀಡಿದರೆ, ಅದು ಆ ದಿನದ 4pm ಗಂಟೆವರೆಗೆ ಹೊಂದಿದ್ದ ಬ್ಯಾಲೆನ್ಸ್ ನೀಡುತ್ತದೆ)
  2. ಕೊನೆಯ ಮೂರು ವಹಿವಾಟುಗಳ ವಿವರಗಳು

ನಾನು ಇಂದಿನ ಪಾವತಿಗಳನ್ನು ನೋಡಲು ಬಯಸುತ್ತೇನೆ,ಅದಕ್ಕೆ ನಾನು ಏನು ಮಾಡಬೇಕು?

ಇಂದು ಸ್ವೀಕರಿಸಿದ ಪೇಮೆಂಟ್ಸ್ ನೋಡಲು, ನೀವು ಅದನ್ನು Paytm for Business app ನಲ್ಲಿ ಕೆಳಗೆ ನೀಡಿರುವ ಹಂತಗಳನ್ನು ಅನುಸರಿಸಿ ನೋಡಬಹುದು.

  • Business with Paytm App ತೆರೆಯಿರಿ
  • ನಿಮ್ಮ credentials ನೊಂದಿಗೆ ಲಾಗಿನ್ ಆಗಿ
  • ಅಪ್ಲಿಕೇಶನ್ ಸ್ಕ್ರೀನ್ ಕೆಳಗಿರುವ ಪೇಮೆಂಟ್ಸ್ ಟ್ಯಾಪ್ ಮಾಡಿ
  • ಸ್ಕ್ರೀನ್ ಮೇಲೆ ಬಲಗಡೆ ಕೊನೆಯಲ್ಲಿ ಸಮಯವನ್ನು ಆಯ್ಕೆಮಾಡಲು ಒಂದು ಡ್ರಾಪ್ ಡೌನ್ ಇರುತ್ತದೆ, ಅದರ ಮೇಲೆ ಟ್ಯಾಪ್ ಮಾಡಿ ಮತ್ತು ಇಂದಿನ ದಿನಾಂಕ ಆಯ್ಕೆಮಾಡಿ.

ಇಲ್ಲಿ ನೀವು ಇಂದು  ಒಟ್ಟು ಸ್ವೀಕರಿಸಿದ ಪೇಮೆಂಟ್ಸ್ ಜೊತೆಗೆ ವ್ಯೆಯಕ್ತಿಕ ಪೇಮೆಂಟ್ ವಿವರಗಳನ್ನು ತೋರಿಸುತ್ತದೆ.

ನೀವು ಸ್ಮಾರ್ಟ್ ಫೋನ್ ಹೊಂದಿಲ್ಲದಿದ್ದರೆ 7053112112 ಕ್ಕೆ ಮಿಸ್ಡ್ ಕಾಲ್ ನೀಡಿ ಮತ್ತು ನೀವು SMS ಅನ್ನು ಸ್ವೀಕರಿಸುವಿರಿ

 

ನಾನು ಪೇಟಿಎಂ ನೊಂದಾಯಿತ ಮರ್ಚೆಂಟ್ ಹೇಗೆ ಆಗಬಹುದು?

  1. ಪೇಟಿಎಂ ನೊಂದಾಯಿತ ಮರ್ಚೆಂಟ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮತ್ತು ನಿಮ್ಮ ಪೇಟಿಎಂ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ನೊಂದಿಗೆ ಲಾಗಿನ್ ಆಗಿ. 
  2. ಫಾರ್ಮ್ ನಲ್ಲಿ ಅಗತ್ಯವಿರುವ ವಿವರಗಳನ್ನು ತುಂಬಿ
  1. ಫಾರ್ಮ್ ಸಲ್ಲಿಸಿದ ನಂತರ, ನಿಮನ್ನು ಮರ್ಚೆಂಟ್ ಆಗಿ ನೊಂದಾಯಿಸಲು ನಮ್ಮ ತಂಡದವರು ನಿಮನ್ನು ಸಂಪರ್ಕಿಸುತ್ತಾರೆ
  2. ನೀವು 50k ಮರ್ಚೆಂಟ್ ಅದಲ್ಲಿ , ನಮ್ಮೊಂದಿಗೆ ಲಿಂಕ್ ಮಾಡಿರುವ ನಿಮ್ಮ ಬ್ಯಾಂಕ್ ಖಾತೆಗೆ ನೆರವಾಗಿ 50,000.ರೂ ವರೆಗೆ 0% ದರದಲ್ಲಿ ಸ್ವೀಕರಿಸುವರಿ. 

ಸ್ವೀಕರಿಸಿದ ಯಾವುದೇ ಪೇಮೆಂಟ್ ನ ಆರ್ಡರ್ ಐಡಿ ಅನ್ನು ನಾನು ಹೇಗೆ ಪಡೆಯಬಹುದು

ನಿಮ್ಮ ಖಾತೆಯಲ್ಲಿ ಸ್ವೀಕರಿಸಿದ ಪ್ರತಿ ಪೇಮೆಂಟ್ ಗೆ ನಾವು ಕಳುಹಿಸಿದ SMS ನಲ್ಲಿ ಆರ್ಡರ್ ಐಡಿ ಲಭ್ಯವಿದೆ. ಈ ಕೆಳಗಿನ ಹಂತಗಳನ್ನು ಅನುಸರಿಸಿ ನೀವು Business with Paytm App ಅಪ್ಲಿಕೇಶನ್ನಲ್ಲಿ ಆರ್ಡರ್ ಐಡಿ ಅನ್ನು ಪರಿಶೀಲಿಸಬಹುದು (ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ):

  1. ಬಿಸಿನೆಸ್ ಅಪ್ಲಿಕೇಶನ್ ನಲ್ಲಿ ಪೇಮೆಂಟ್ಸ್ ಟ್ಯಾಬ್ ಗೆ ಹೋಗಿ
  2. ಬಲಗಡೆ ಮೇಲಿನ ಮೂಲೆಯಲ್ಲಿರುವ ಕ್ಯಾಲೆಂಡರ್ ಐಕಾನ್ ನಲ್ಲಿ ನೀವು ಬಯಸುವ ಆರ್ಡರ್ ಐಡಿ ಗಾಗಿ ಪೇಮೆಂಟ್ ನ ದಿನಾಂಕವನ್ನು ಆಯ್ಕೆಮಾಡಿ.
  3. ನಿಮ್ಮ ಖಾತೆಯಲ್ಲಿ ಸೆಟ್ಲ್ ಆಗಿರುವ ವ್ಯೆಯಕ್ತಿಕ ವ್ಯವಹಾರಗಳೊಂದಿಗೆ ಮೇಲೆ ಒಟ್ಟು ಮೊತ್ತವು ಪ್ರತಿಬಿಂಬಿಸುತ್ತದೆ
  4. ಆರ್ಡರ್ ಐಡಿ ವೀಕ್ಷಿಸಲು ಯಾವುದೇ ಟ್ರಾನ್ಸಾಕ್ಷನ್ ಮೇಲೆ ಟ್ಯಾಪ್ ಮಾಡಿ

ನ್ಯಾಯೋಚಿತ / ಅನ್ಯಾಯದ ಬಳಕೆಯ ನೀತಿಗಳು

ಪೇಟಿಎಂ ಮರ್ಚೆಂಟ್ ಖಾತೆಯ ನ್ಯಾಯಯುತ ಬಳಕೆಯ ಅರ್ಥವೇನು?

  • ಗ್ರಾಹಕರಿಂದ ಪೇಮೆಂಟ್ಸ್ ಸ್ವೀಕರಿಸಲು ಮಾತ್ರ ಮರ್ಚೆಂಟ್ QR ಅಥವಾ ಬಿಸಿನೆಸ್ QR ಕೋಡ್ ಬಳಸುವುದು.
  • ನಿಮ್ಮ ಪೇಟಿಎಂ ಬಿಸಿನೆಸ್ ಖಾತೆಯಡಿಯಲ್ಲಿ ನೋಂದಾಯಿಸಲಾದ ಸರಕು ಮತ್ತು ಸೇವೆಗಳಿಗೆ ಮಾತ್ರ ಪೇಮೆಂಟ್ಸ್ ಸ್ವೀಕರಿಸುವುದು

ಪೇಟಿಎಂ ಸೇವೆಗಳ ಅನ್ಯಾಯದ ಬಳಕೆಯ ಉದಾಹರಣೆ ಏನು?

  • ಗ್ರಾಹಕರಲ್ಲದ / ಮರ್ಚೆಂಟ್ ವರ್ತನೆಗಾಗಿ ಪೇಟಿಎಂ ಮರ್ಚೆಂಟ್ QR ಅನ್ನು ಬಳಸುವುದು.
  • ಗ್ರಾಹಕರಿಂದ ತಮ್ಮ ಬ್ಯಾಂಕ್ ಖಾತೆಗಳಲ್ಲಿ ನಗದು ಪ್ರಯೋಜನಗಳನ್ನು / ಹಣವನ್ನು ಒದಗಿಸಿದ್ದಕ್ಕಾಗಿ ಇದಕ್ಕೆ ಹಿಂತಿರುಗಿ ಪಾವತಿಗಳನ್ನು ಸ್ವೀಕರಿಸುವುದು.

ಈ ಅಭ್ಯಾಸಗಳು ಪೇಟಿಎಂ ನೀಡುವ ಮರ್ಚೆಂಟ್ ಸವಲತ್ತುಗಳ ಮೇಲೆ ಸ್ಥಗಿತ / ನಿರ್ಬಂಧಗಳಿಗೆ ಕಾರಣವಾಗಬಹುದು.
ಅನ್ಯಾಯದ ಪೇಟಿಎಂ ಬಳಕೆಯಿಂದಾಗಿ ವಾಲೆಟ್ ಪಾವತಿ ವಿಧಾನವನ್ನು ನಿಷ್ಕ್ರಿಯಗೊಳಿಸಬಹುದೇ, ಮುಂದೆ ಅದನ್ನು ಮತ್ತೆ ಸಕ್ರಿಯಗೊಳಿಸಬಹುದೇ?
ವಾಲೆಟ್ ಪಾವತಿ ವಿಧಾನ, ಅನ್ಯಾಯದ ಬಳಕೆಯಿಂದ ನಿಷ್ಕ್ರಿಯಗೊಳಿಸಿದ್ದರೆ, ನೀವು ಪೇಟಿಎಂ ವಾಲೆಟ್ ಮೂಲಕ ಸ್ವೀಕರಿಸಿದ ಪೆಮೇಟ್ಸ್ ಗಳಿಗೆ 1.99% + GST ಶುಲ್ಕವನ್ನು ಪಾವತಿಸಲು ಒಪ್ಪಿದರೆ ಮಾತ್ರ ಪುನಃ ಸಕ್ರಿಯಗೊಳಿಸಬಹುದು.
ಶುಲ್ಕವಿಲ್ಲದೆ ಪೇಮೆಂಟ್ಸ್ ಅನ್ನು ನಾನು ಹೇಗೆ ಸ್ವೀಕರಿಸಬಹುದು?
ಯಾವುದೇ ಶುಲ್ಕವಿಲ್ಲದೆ ಪೇಮೆಂಟ್ಸ್ ಸ್ವೀಕರಿಸಲು ನೀವು UPI/PPBL ನೆಟ್ ಬ್ಯಾಂಕಿಂಗ್ ಪಾವತಿ ವಿಧಾನಗಳನ್ನು ಬಳಸಬಹುದು.

ನಮ್ಮೊಂದಿಗಿನ ವಿವಿಧ ಸಮಸ್ಯೆಗಳಿಗೆ ನಿಮ್ಮ ತೊಂದರೆಗಳನ್ನು ಪರಿಹರಿಸಲು ದಯವಿಟ್ಟು ಕೆಳಗೆ ನೀಡಿರುವ ನಮ್ಮ ಮೀಸಲಾದ ಸಹಾಯವಾಣಿಗೆ  ಕರೆಮಾಡಿ

ಮರ್ಚೆಂಟ್ ಹೆಲ್ಪ್ ಡೆಸ್ಕ್0120-4440-440
 ಬ್ಯಾಂಕ್,ವಾಲೆಟ್ ಮತ್ತು ಪೇಮೆಂಟ್ಸ್ 0120-4456-456
ಮೂವೀಸ್ ಮತ್ತು ಇವೆಂಟ್ಸ್ ಟಿಕೆಟ್ ಗಳು 0120-4728-728
ಪೇಟಿಎಂ ಮಾಲ್ ಶಾಪಿಂಗ್ ಆರ್ಡರ್ಸ್0120-4606060
ಪೇಟಿಎಂ ಟ್ರಾವೆಲ್ ಟಿಕೆಟ್ ಗಳು ಮತ್ತು ಫೊರೆಕ್ಷ್0120-4880-880